ಕೃತಿ 1
ರಾಗ : ಸಿಂಹವಾಹಿನಿ
ತಾಳ : ಮಿಶ್ರಛಾಪು
||ಪಲ್ಲವಿ||
ನಮಾಮಿ ಪ್ರತ್ಯಂಗಿರಾ ದೇವೀಂ
ನತಜನ ಪರಿಪಾಲಿನೀಂ ತ್ರಿಶೂಲಿನೀಂ
||ಅನುಪಲ್ಲವಿ||
ಅಥರ್ವಣ ವೇದಾಧೀಶ್ವರೀಂ
ಭದ್ರಕಾಳೀಂ ಜಗದೀಶ್ವರೀಂ
||ಚರಣ||
ಸಿಂಹಾನನಾಂ ನರಸಿಂಹಿಕಾಂ ಸಿಂಹವಾಹಿನೀಂ
ಪಾಶ ಢಮರು ಕಪಾಲ ಧಾರಿಣೀಂ
ವೀರ ಕ್ಷಾತ್ರತೇಜಸ್ಕಕಾರಿಣೀಂ
ಕೃತ್ರಿಮಗುಣ ವಿನಾಶಿನೀಂ
|| ಮಧ್ಯಮಕಾಲ ಸಾಹಿತ್ಯ||
ಹರಿಶಿವಶಕ್ತಿ ರೂಪಿಣೀಂ ಅರಿಮರ್ಧಿನೀಂ
ವಿಘ್ನರಾಜ ನುತ ಪಾದಾಂಘ್ರೀಂ
Raga : Simhavaahini
Tala: Mishra chapu
Pallavi
NamAmi pratyangirA dEveem
Natajana paripAlini trishUlineem
Anupallavi
AtharvaNa vEdAdhIshwareem
BhadrakAleem jagadeeshwareem
Charana
SimhAnanAm narasimhikAm simha vAhineem
PAsha Damaru kapAla DhAriNeem
Veera kshAtra tejaskAriNeem
KrutrimaguNa vinAshiNeem
Madhyama kAla sAhitya
Hari shiva shakthi rUpineem ari mardhineem
Vighnaraja nutha padAnGhreem
______________________________________
ಕೃತಿ 2
ರಾಗ - ಕೇದಾರ
ತಾಳ - ಮಿಶ್ರಛಾಪು
||ಪಲ್ಲವಿ||
ಕೇದಾರನಾಥಂ ಭಜೇಹಂ
ಕರುಣಾಸಾಗರಂ ವಿಶ್ವೇಶಂ
||ಅನುಪಲ್ಲವಿ||
ನಂದೀಶಾಗ್ರ ರೂಪೇ ಸ್ಥಿತಂ
ಮಂದಾಕಿನೀ ಸೇವಿತ ಪಾದಂ
|| ಮಧ್ಯಮಕಾಲ ಸಾಹಿತ್ಯ ||
ನಂದಿ ಭೃಂಗ್ಯಾದಿ ಗಣ ಸೇವ್ಯಂ
ನರೇಶ ವಂದಿತ ಮಹೇಶ್ವರಂ
|| ಚರಣ ||
ರಜತಾದ್ರಿ ಪ್ರಭಾವಳಿ ಪ್ರಿಯಂ
ಗಜಮುಜ ಜನನೀ ಸಮೇತಂ
ಸುಜನ ಮನೋಲ್ಲಸಿತಂ ರಸಿಕಂ
ವಿಘ್ನರಾಜ ವಿನುತ ಗಿರೀಶಂ
||ಮಧ್ಯಮ ಕಾಲ ಸಾಹಿತ್ಯ||
ನಾದಾತ್ಮಕಂ ನಟನ ಚತುರಂ
ಆರೂಢ ಜನಪರಿಪಾಲಂ
ಉಮಾರಮಣಂ ಆನಂದಂ
ಚಿದಾನಂದಂ ಸಚ್ಚಿದಾನಂದಂ
Raga: KedAra
Tala : Mishra chApu
|| Pallavi ||
KEdAra nAtham bhajEham
KaruNA sAgaram vishwesham
|| Anupallavi ||
NandeeshAgra rUpE sThitam
MandAkinI sEvitha pAdam
|| Madhyama kAla sAhitya ||
Nandi BrungyAdi gaNa sEvyam
NarEsha vanditha mahEshwaram
|| CharaNa ||
RajatAdri praBhAvaLi priyam
Gajamukha jananI samEtham
Sujana manollasitham rasikam
Vighnaraja vinutha gireesham
Madhyama kAla sAhitya
NAdAtmakam natana chathuram
ArUDa janaparipAm
UmA ramaNam Anandam
ChidAnandam sath chidAnandam
_______________________________________
ಕೃತಿ 3
ರಾಗ - ಸಾರಂಗ
ತಾಳ - ರೂಪಕ
||ಪಲ್ಲವಿ||
ಶ್ರೀಗುರು ದತ್ತಾತ್ರೇಯಂ ಸದಾ ಸ್ಮರಾಮ್ಯಹಂ ಮನಸಾ
||ಅನುಪಲ್ಲವಿ||
ಹರಿಹರ ಬ್ರಹ್ಮ ಸ್ವರೂಪಂ
ಸುರನರ ನಿಜಭಕ್ತ ವರದಂ
||ಚರಣ||
ಕಲಿಯುಗಾವತಾರ ದೇವಂ
ಶ್ರೀಪಾದ ಶ್ರೀ ವಲ್ಲಭಂ
ಔದುಂಬರ ಸದನಾಂ ಗಾಣಗಾಪುರೇ ಸ್ಥಿತ ನಿರ್ಗುಣ ಪಾದುಕಾಂ
||ಮಧ್ಯಮಕಾಲ ಸಾಹಿತ್ಯ||
ಜನ್ಮಾರ್ಜಿತ ಪಾಪಹಾರಣಂ ವಿಘ್ನರಾಜಾರಾಧಿತಂ
ಜಯಜಯ ಶ್ರೀನೃಸಿಂಹ ಸರಸ್ವತೀಂ ಜಗದ್ಗುರುಂ.
Raga : Saaranga
Tala : Rupaka
Pallavi
Sri guru dattAtreyam sadA smarAmyaham manasA
Anupallavi
Harihara bramha swarUpam
Suranara nija bhaktha varadam
Charana
KaliyugAvathAra dEvam
SripAda srivallabham
Audumbara sadanAm
GANagApurE sthita nirguNa pAdukAm
Madhyama kAla sAhitya
JanmArjitha pApahAraNam VighnarajArAdhitam
Jaya jaya srinrusimha saraswatheem jagadgurum
____________________________________________________
ಕೃತಿ 4
ರಾಗ- ಮುಖಾರಿ
ತಾಳ ಆದಿ ವಿಳಂಬ
|| ಪಲ್ಲವಿ||
ಶೃಂಗಪುರಾಧೀಶ್ವರಿ ಪಾಹಿ ಶ್ರೀ ಶಾರದೆ
||ಅನುಪಲ್ಲವಿ||
ತುಂಗಾತಟ ವಿರಾಙ್ನಿ
ಸಂಗೀತ ಸಾಮ್ರಾಙ್ನಿ
||ಚರಣ||
ಮಂಗಳದಾಯಿನಿ
ವಿಘ್ನರಾಜ ನುತ ಮಾನಿನಿ
ಮಂದಹಾಸ ಶೋಭಿನಿ
ಕುವಲಯ ಸುಲೋಚನಿ
|| ಮಧ್ಯಮಕಾಲ ಸಾಹಿತ್ಯ||
ಸುಮುಖಾರಿ ಕಳಾಧರಿ ಭಾರತಿ
ಸಾಮಗಾನ ಸುಕಲಾ ವಿಲಾಸಿನಿ
ವೀಣಾವಾದನ ವಿನೋದಿನಿ
ಶಂಕರಾಚಾರ್ಯ ಸ್ಥಾಪಿತ ಜನನಿ
_________________________________________
ಕೃತಿ 5
ರಾಗ - ಬಾಗೇಶ್ರೀ
ಆದಿತಾಳ
03-09-2018(ಕೃಷ್ಣ ಜನ್ಮಾಷ್ಟಮಿ ದಿನ)
ಗೋಕುಲನಂದನ ಗೋಪಿಕಾನಂದ
ಗೋವರ್ಧನಧರ ಗೋವಿಂದ
ಜಾರ ಕಿಶೋರ ನವನೀತ ಚೋರ
ಮುರಳೀ ಲೋಲ ಸುಕುಮಾರ ಬಾಲ
ಪಾಲಯ ಸದಯಾ ಪಾವನ ಮುರಹರ
ಪಾರಯ ಭವಸಾಗರ ಶ್ರೀಧರ
ಪರಮಾತ್ಮ ಪರಬ್ರಹ್ಮ ಸ್ವರೂಪ
ನರವಿಘ್ನರಾಜ ಸಖ ಪಾಹಿ ಶ್ರೀಕರ
___________________________________
ಕೃತಿ 6
ರಾಗ - ನಾಟ. ತಾಳ-ರೂಪಕ
ಪಲ್ಲವಿ
ಗಜವದನ ವಿಘ್ನ ಹರಣ
ಲಂಬೋದರ ಪಾಹಿ ಪ್ರಣವಾಕಾರ
ಸಮಷ್ಠಿಚರಣ
ಮೂಷಿಕವಾಹನ ಮೋದಕ ಕರ
ಪಾಶಾಂಕುಶಧರ ಪಾರ್ವತಿ ತನಯ
ಆದಿಪೂಜಿತ ಕರಿವದನ
ಸಿದ್ಧಿಬುದ್ಧಿ ಪ್ರದಾಯಕ
ವಿಘ್ನರಾಜಾದಿ ದ್ವಾದಶ
ನಾಮ ಪೂಜಿತ ಓಂಕಾರ
__________________________________________
ಕೃತಿ 7
ಶ್ರೀ ರಾಗ
ರೂಪಕ ತಾಳ
||ಪಲ್ಲವಿ||
ಶ್ರೀ ಮೂಕಾಂಬಿಕಾo ಚಿಂತಯೇಹಂ
ಸತತo
||ಸಮಷ್ಠಿ ಚರಣ||
ಶ್ರಿತಜನ ಜ್ಞಾನ ಪ್ರದಾಯಿನೀಂ
ಸೌಪರ್ಣಿಕಾ ತಟ ನಿವಾಸಿನೀಂ
|| ಮಧ್ಯಮಕಾಲ ಸಾಹಿತ್ಯ||
ಅಂಬಿಕಾಂ ಮೂಕಾಂಬಿಕಾಂ ಜಗದಂಬಿಕಾಂ
ಆದಿ ಶಕ್ತೀಂ ವಿಘ್ನರಾಜ ಜನನೀಂ ಶಂಕರೀಂ
_________________________________________
ಕೃತಿ 8
ರಾಗ - ಬಿಲಹರಿ
ತಾಳ - ಖಂಡ ಛಾಪು
||ಪಲ್ಲವಿ ||
ಶ್ರೀ ವೇಣುಗೋಪಾಲಂ ಸ್ಮರಾಮಿ ಸತತಂ
|| ಅನುಪಲ್ಲವಿ||
ಶ್ರೀ ರುಕ್ಮಿಣಿ ಲೋಲಂ
ಶ್ರಿತ ಭಕ್ತ ಪಾಲಂ
|| ಚರಣ||
ವನಮಾಲಾಧರಂ
ವನ ಮಲ್ಲೇಶ್ವರ ಸಖಂ
ಜನ ಮಾನಸ ವಿಹಾರಂ
ಮನಮೋಹನ ಬಾಲಂ
|| ಮಧ್ಯಮಕಾಲ ||
ಪೀತಾಂಬರ ವಸನಂ
ಗೋಪೀ ಹೃತ್ಸದನಂ
ನವನೀತ ಚೋರಂ
ವಿಘ್ನರಾಜ ನುತ ವರಂ
_________________________________________
ಕೃತಿ 9
ಅಠಾಣ ರಾಗ
ಆದಿ ತಾಳ
ದೀನ ಜನ ಪಾಲಕ ನಮೋ ನಮೋ
ಧೀರ ರಘು ವೀರ ನಮೋ ನಮೋ
ದಿನಕರ ಕೋಟಿ ಸಮ ಪ್ರಭ ನಮೋ
ದಿತಿ ಸುತ ಕುಲಾಂತಕ ನಮೋ ನಮೋ
ಧೀಮಂತ ದಶರಥಾತ್ಮಜ ನಮೋ
ಧಿಮಿಕಿಟ ಸಹಿತ ಸಂಗೀತ ಪ್ರಿಯ ನಮೋ
ದಿಕ್ಪಾಲಕ ಪಾಲಕ ರಾಮ ನಮೋ
ದೀನ ವಿಘ್ನರಾಜ ನುತ ನರೇಂದ್ರ ನಮೋ
__________________________________________
ಕೃತಿ 10
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಶ್ರೀ ಕೃಷ್ಣ
ದೊಡ್ಡ ದೊಡ್ಡ ಗಡಿಗೆ ಎಳೆದು ಬೆಣ್ಣೆ ತಿಂದ ಕೃಷ್ಣ
ಪುಟ್ಟ ದಿಟ್ಟ ಹೆಜ್ಜೆ ಇಟ್ಟು ತುಳಿದು ಕಾಳಿಂಗನ
ಮರ್ದನ ಮಾಡಿದ್ದು ನೀನೇನೋ ಕೃಷ್ಣಾ
ಪುಟ್ಟ ಬಾಯೊಳಗೆ ಜಗವ ಅಮ್ಮಗೆ ತೋರಿದ ಪೋರ
ಮುಟ್ಟಿ ತಟ್ಟಿ ಗೋಪಿಯರ ಮನಕದ್ದ ಚೋರ
ಪುಟ್ಟ ದೊಡ್ಡ ಎಲ್ಲ ನೀನೆಂದು ಅರುಹಿದ ವೀರ
ಶಿಷ್ಟಭಕ್ತರ ಕಷ್ಟ ಕಳೆವ ವಿಘ್ನರಾಜನೂ ನೀನೇ ಕೃಷ್ಣಾ
_________________________________________
ಕೃತಿ 11
31-01-20
ಕೇದಾರ ಗೌಳ
ರಾಪಕ ತಾಳ
ಪಲ್ಲವಿ
ಶ್ರೀ ಚಂಡಿಕಾ ದೇವೀಂ ಭಜೇಹಂ
ಚಕ್ರಾದಿ ಧಾರಿಣೀಂ ಸತತಂ
ಅನುಪಲ್ಲವಿ
ಶ್ರೀ ವಿದ್ಯಾವಿದ್ಯಾದಿ ರೂಪಿಣೀಂ
ಶ್ರೀ ವಿಘ್ನರಾಜ ನುತ ಪದಾಂಘ್ರೀಂ
ಚರಣ
ಶ್ರಿತಜನ ಭಕ್ತ ಪರಿಪಾಲಿನೀಂ
ಶ್ರೀ ಶಂಕರ ಹೃನ್ಮನ ವಿಲಾಸಿನೀಂ
ಹ್ರೀಂಕಾರಾದಿ ಸಕಲ ಬೀಜಾಕ್ಷರ ಸ್ವರೂಪಿಣೀಂ
ಹೂಂಕಾರ ಮಾತ್ರೇಣ ದೈತ್ಯಗಣ ಹಾರಿಣೀಂ
___________________________________________
10-02-2020
ಕೃತಿ 12
|| ದಶವಿಧ ಭಕ್ತಿ ರಚನೆ ||
ಶ್ರವಣ ಮಾಡಿರೋ ಶ್ರೀ ಹರಿ ಕಥೆಯ
ಕೀರ್ತನೆ ಪಾಡಿರೋ ಸದಾಶಿವನ
ಸ್ಮರಣೆ ಮಾತ್ರದಿ ಭವ ಭಯ ನೀಗಿಸೋ
ಹರಿಹರರ ಪಾದ ಸೇವಿಸಿರೋ
ತುಳಸಿ ಪುಷ್ಪಾದಿಗಳಿಂದ ಅರ್ಚನೆ ಮಾರಜನಕಗೆ
ಮನಸಾ ಶಿರಸಾ ವಂದಿನೆ ಕುಮಾರಜನಕಗೆ
ದಾಸ್ಯ ಸಖ್ಯ ಸುಖವಿತ್ತು ವಿಘ್ನರಾಜನಿಗೆ
ಅದ್ವೈತ ಭಕ್ತಿನೀಡೆಂಬ ಪರಮಾತ್ಮ ನಿವೇದನೆ
_________________________________________
9:04 pm
16-04-20
ಕೃತಿ 13
ದೇಶ್ ರಾಗ
ಆದಿ ತಾಳ
|| ಪಲ್ಲವಿ ||
ಕಿವಿಗೆ ಬೀಳದೇನೋ ನನ್ನ ಮೊರೆ
ಕಿವಿಗೆ ಕೇಳದೇನೋ ಹರಿಯೇ
|| ಅನುಪಲ್ಲವಿ ||
ವಿಸ್ತಾರ ಸಾಗರವ ದಾಟಿಸೋ ದೊರೆಯೇ
ಕಸ್ತೂರಿ ಕನ್ನಡದ ಮನದಾಳದ ಕರೆ
|| ಚರಣ ||
ಪುರಂದರ ದಾಸರ ಮನೆಗೆ ಕರೆಯದೇ ಬಂದೆ
ಕನಕದಾಸರಿಗೆ ಕಿಂಡಿಯ ಕೊರೆದು ಕಂಡೆ
ಧನಿಕನಲ್ಲ ಧೀರನಲ್ಲ ಭಕ್ತಿ ಸಾರವನರಿಯೆ
ವಿಘ್ನರಾಜಗೂ ದೀಪವಾಗಿ ಬಾರೋ ಹರಿಯೇ
___________________________________________
ಸೀತಾ ದೇವಿ ಜಯಂತಿ
18- 03 - 2020
4:45pm (composed during Mahitha class)
ಕೃತಿ 14
|| ಪಲ್ಲವಿ ||
ನಮೋ ನಮೋ ಸೀತಾ ದೇವಿ
ನಮೋ ಭೂಮಿಜಾ ನಾರೀಮಣಿ
||ಅನುಪಲ್ಲವಿ ||
ನಮೋ ಸಾಕೇತ ರಘು ಕುಲ ರಾಜ್ಞಿ
ನಮೋ ಸರಾಘವ ವನಾನುಗಮನಿ
|| ಚರಣ ||
ನಮೋ ಸಾರಂಗಾಕರ್ಷಿತಾಕ್ಷಿ
ನಮೋ ದುರಾಸುರಪಹೃತ ವಹ್ನಿ
ನಮೋ ದಶಾನನಹರ ಕಾರಣಿ
ನಮೋ ಕ್ಷಮಯಾ ಧರಿತ್ರೀ ರೂಪಿಣಿ
|| ಮ, ಕಾ, ಸಾಹಿತ್ಯ ||
ನಮೋ ಕುಲ ಕುಶಲ ಕುಶಲವ ಜನನಿ
ನಮೋ ವಿಘ್ನರಾಜ ನುತ ಜಾನಕಿ
________________________________________
Time 4 :42pm
Date : 4 - 5 - 2020
ಕೃತಿ 15
ರಾಗ - ಲಲಿತ
ತಾಳ - ರೂಪಕ
|| ಪಲ್ಲವಿ ||
ಭಜೇ ಶ್ರೀ ಶಂಕರ ಭಗವತ್ಪಾದಂ ಸದಾಹಂ||
|| ಅನುಪಲ್ಲವಿ ||
ಭಜೇ ಆರ್ಯಾಂಬಾ ಶಿವಗುರುಜಾತಂ ಪರಶಿವವರಂ||
|| ಚರಣ ||
ಚತುರಾಮ್ನಾಯ ಪೀಠ ಸ್ಥಾಪಿತ ಸರ್ವಜ್ಞ ಗುರುಂ ||
ಶಿವೋಹಂಬ್ರಹ್ಮಾಸ್ಮಿ ಪ್ರತಿಪಾದಿತ ಅದ್ವೈತ ಗುರುಂ ||
ವೇದ ಗೀತೋಪನಿಷತ್ಸಾರ ಸಂಗ್ರಹ ಜಗದ್ಗುರುಂ ||
ಆದ್ಯಂತರಹಿತ ಧರ್ಮೋಧ್ಧಾರಕಂ ವಿಘ್ನರಾಜ ನುತಂ
_____________________________________________
Date 05-05-2020
ಕೃತಿ 16
ರಾಗ : ಅಭೇರಿ
ತಾಳ : ಆದಿ
ಕೇಶವ ಮಾಧವ ಮುರಹರ ಗೋವಿಂದ
ನಾರಾಯಣ ಅಚ್ಯತ ನಾಮ ಭಜಿಸಿರೋ
ವಿಶ್ವದೊಡೆಯ ನಮ್ಮ ಕೃಷ್ಣನ ಸ್ಮರಿಸಲು
ಕಷ್ಟವೆದರಿಸುವ ಶಕ್ತಿಯ ಕೊಡುವನೋ
ಶಾಶ್ವತ ಪದವಿಯ ದಾರಿಯ ಕಾಣಲು
ದೇಶದೇಶವ ತಿರುಗಿ ಕೋಶ ಓದುತಲಿದ್ದು
ಆಷಾಡಭೂತಿಯ ತೊರೆದು ಭಕುತಿಯಿಂದ
ಕೃಷ್ಣನ ಧ್ಯಾನಿಸಿ ವಿಘ್ನರಾಜನ ಜೊತೆಗೆ
____________________________________________
22-05-2020
ಕೃತಿ 17
ರಾಗ : ಆರಭಿ
ತಾಳ : ಆದಿ
|| ಪಲ್ಲವಿ ||
ಶ್ರೀ ರಾಮಚಂದ್ರಂ ಭಜೇಹಂ
ಸೀತಾ ನಾಯಕಂ ಸಾಕೇತಾಧಿಪಂ ರಘುವರಂ
|| ಅನುಪಲ್ಲವಿ ||
ಶ್ರೀ ಶಿವಧನು ಭಂಜನಂ ಪೂರ್ವ ರಾಮಾವತಾರ ಸಂದರ್ಶಿತಂ ಜಿತಂ
ಹನುಮತ್ಸೇವಿತ ವರಪದ ಯುಗಳಂ
ಗೌತಮದಯಿತಾನುಗ್ರಹ ಪ್ರದಂ
|| ಚರಣ ||
ಕೌಶಿಕ ಅಗಸ್ತ್ಯಾದಿ ಮುನಿವರಾನುಗ್ರಹ ಪಾತ್ರಂ ವಿಘ್ನರಾಜ ನುತಂ
ಕುಶಲ ಮತಿಂ ಪಿತೃವಾಕ್ಯಪಾಲಂ ಪುರುಷೋತ್ತಮಂ ಯಾಗರಕ್ಷಕಂ
ದಶಾನನ ಸಹಿತ ದಾನವಕುಲಾಂತಕಂ ಚತುರೋಪಾಯ ಚತುರ ಚರಿತಂ
ಕುಶಲವ ಪಿತ ಸಹಜಾತ ವೀರ ಭರತ ಶತ್ರುಘ್ನ ಸೌಮಿತ್ರ್ಯಗ್ರಜಂ
____________________________________________
21-06-2020
11-30am - 1 pm
ಸೂರ್ಯ ಗ್ರಹಣ ಕಾಲ
ಕೃತಿ 18
ಪೂರ್ವಿಕಲ್ಯಾಣಿ
ಮಿಶ್ರ ಛಾಪು
ಭಜೇ ಶ್ರೀ ವಾಸುದೇವಂ ಹರಿಂ
ಶ್ರೀ ನಿಧಿಂ ಸತತಮಹಂ
ವ್ರಜ ಲೀಲಾವಿನೋದಂ
ವಾಸವ ಮದಹರಂ
ಸುಜನ ಮಂದಾರಂ ಮುರಹರಂ
ವಿಜಯ ನಾಟಕ ಸೂತ್ರಧಾರಂ
ಗಜರಾಜ ಮೋಕ್ಷ ಸಂಪ್ರದಂ
ಅಜಾರ್ಚಿತ ವಾಮನೋರ್ಧ್ವಪದಂ
ಅಜರಾಮರ ಸಚ್ಚಿದಾನಂದ
ನಿಜ ವಿಶ್ವರೂಪಂ ವಿಘ್ನರಾಜ ನುತಂ
______________________________________
ಕೃತಿ 19
ಸ ರಿ2 ಗ2 ಮ2 ಪ ನಿ3 ಸ - ಸ ನಿ3 ಪ ಮ2 ಗ2 ರಿ2 ಸ
ರಾಗ- ಊರ್ಮಿಕ
ತಾಳ - ದೇಶಾದಿ
29-08-2020
8-56pm
ಪಲ್ಲವಿ
ಕರುಣಾಲಯೆ ಶ್ರೀ ಶಾರದೆ
ಕರಧೃತ ಸುವೀಣಾ ನಾದವಿಲಾಸೆ
ಅನುಪಲ್ಲವಿ
ಮಂಗಳ ಸ್ವರೂಪೆ ತುಂಗಾತಟ ವಿಹಾರೆ
ಶೃಂಗಗಿರಿ ನಿಲಯೆ ಶಶಿನಿಭ ಕಪೋಲೆ
ಚರಣ
ಸಕಲಗುಣ ಪೂರ್ಣೆ ಸಕಲಾಗಮಸಾರೆ
ಸಕಲ ಜನಪಾಲೆ ಸಂಗೀತ ಲೋಲೆ
ಧರಹಿತ ಊರ್ಮಿಕ ರಾಗಸ್ವರೂಪೆ
ವರ ವಿಘ್ನರಾಜ ಪೂಜಿತ ಮೃದುಪದೆ
_______________________________________
ಕೃತಿ 20
ರಾಗ- ವರಾಳಿ
ತಾಳ - ಆದಿ (ವಿಳಂಬ)
ಪಲ್ಲವಿ
ಆದಿಗುರು ದಕ್ಷಿಣಾಮೂರ್ತಿಯ ಧ್ಯಾನಿಸೋ ಮನವೇ
ಅನುಪಲ್ಲವಿ
ಸನಕ ಸನಂದನ ಸನತ್ಕುಮಾರ ಸನಾತನರಿಗೆ ಜ್ಞಾನಕರ ಮೌನಿ
ಚರಣ
ವಿಜ್ನಾನ ಸುಯೋಗ ಸಂಗೀತ ಸ್ವರೂಪನ,
ಅಜ್ನಾನರೂಪಿ ಆಪಸ್ಮಾರನ ತುಳಿದ,
ವಿಘ್ನರಾಜನುತ ಪದಕಮಲ ಯುಗಳ,
ವಹ್ನಿ ಅಕ್ಷಮಾಲ ಜ್ಞಾನಾಭಯ ಹಸ್ತ ,
ವಟವೃಕ್ಷ ತಳದಿ ಕುಳಿತ ವೃಷಭ ಧ್ವಜ,
ಪರಮಗುರು ಪರಶಿವ ಇಹಪರ ಶಂಕರ ಶ್ರೀ
_______________________________________________
15-01-2021
11-20 pm
ಕೃತಿ 21
ದೇವಗಾಂಧಾರಿ
ದೇಶಾದಿ
ಪಲ್ಲವಿ
ರಾಧಾ ಮನೋಹರಂ ವಂದೇಹಂ
ಮಾಧವ ಮುರಳೀಧರಂ ನವಮಣಿಮಯ ಕೃಷ್ಣಂ
ಅನುಪಲ್ಲವಿ
ಧರಲೋಲ ಬಾಲಂ ಗೋವರ್ಧನ ಧರಂ
ಮಾರಕೋಟಿರೂಪಂ ಸುರಾರಿಮುರ ಹರಂ
ಚರಣ
ಗೋಕುಲ ಮಹಿತಂ ಗೋಪಿಕಾ ಮುದಿತಂ
ಸಕಲ ಗುಣಶೀಲಂ ಗೀತ ತತ್ವ ಸಾರಂ
ಮಧ್ಯಮ ಕಾಲ
ಸುರನರಾರಿ ನರಕಾಸುರಹರಂ
ಧರ ಪೀತಾಂಬರ ಸುಂದರ ವದನಂ
ದೃತ ಶಂಖಚಕ್ರ ಕರಕಮಲಂ
ವರ ವಿಘ್ನರಾಜನುತ ದ್ವಾರಕಾಧಿಪಂ
--------------------------‐---—-------------------------------
No comments:
Post a Comment